ಕಳೆದ ಲೇಖನದಲ್ಲಿ ಹೇಳಿದಂತೆಯೇ ಫ್ಲಿಪ್ಕಾರ್ಟ್ ನ “ಬಿಗ್ ಬಿಲಿಯನ್ ಡೇಸ್” ಹಾಗು ಅಮೆಜಾನ್ ನ “ಗ್ರೇಟ್ ಇಂಡಿಯನ್ ಫೆಸ್ಟಿವಲ್” ಸೇಲ್ ನ ದಿನಾಂಕಗಳು ಬಹುತೇಕ ಘರ್ಷಣೆಯಾಗಲಿವೆ. ಅಮೆಜಾನ್ ವೆಬ್ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಇದೇ ಅಕ್ಟೋಬರ್ 17 ರಂದು ಪ್ರಾರಂಭವಾಗಲಿದೆ. ಪ್ರೈಮ್ ಚಂದಾದಾರರಿಗೆ ಒಂದು ದಿನ ಮುಂಚೆಯೇ ಅಂದರೆ ಅಕ್ಟೋಬರ್ 16 ಕ್ಕೆ ಪ್ರವೇಶ ದೊರೆಯಲಿದೆ.
ಎಂದಿನಂತೆ ಅಮೆಜಾನ್ ಎಚ್.ಡಿ.ಎಫ್.ಸಿ(HDFC ) ಬ್ಯಾಂಕ್ ಜೊತೆ ಕೈ ಜೋಡಿಸಿದ್ದು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರರಿಗೆ 10% ತ್ವರಿತ ರ್ರಿಯಾಯಿತಿ ದೊರೆಯಲಿದೆ. ರಿಯಾಯಿತಿಯ ಗರಿಷ್ಟ ಮಿತಿ ಸದ್ಯಕ್ಕೆ ಲಭ್ಯವಿಲ್ಲ. ಬಜಾಜ್ ಫಿನ್ ಸರ್ವ್ ಕ್ರೆಡಿಟ್ ಹಾಗು ಡೆಬಿಟ್ ಕಾರ್ಡ್ ಬಳಕೆದಾರರಿಗೆ ಬಡ್ಡಿ ರಹಿತ ಸಾಲದ ಕಂತುಗಳು ದೊರೆಯುವುದರ ಜೊತೆಗೆ 1 ಲಕ್ಷದ ವರೆಗೆ ಸಾಲ ದೊರೆಯಲಿದೆ. ಇದಲ್ಲದೆ ಅಮೆಜಾನ್ ಪೇ ಬಳಸಿ ಪಾವತಿಸಿದರೆ ಕ್ಯಾಶ್ ಬ್ಯಾಕ್ ಕೂಡ ದೊರೆಯಲಿದೆ.
ಅಮೆಜಾನ್ ವೆಬ್ಸೈಟ್ ನಲ್ಲಿ ಗಮನ ಸೆಳೆಯುವ ಆಫರ್ ಗಳಲ್ಲಿ ಐಫೋನ್ 11 ರ ಬೆಲೆ 4_,999 ರೂ . ಅಂದರೆ ಗರಿಷ್ಠ 49,999 ರೂ. ಗೆ ಲಭ್ಯವಾಗಬಹುದೆಂದು ಊಹಿಸಬಹುದು. ಇದಲ್ಲದೆ ಸ್ಯಾಮ್ಸಂಗ್ ನ M ಸರಣಿ ಹಾಗು ಒನ್‌ಪ್ಲಸ್ ಸರಣಿಯ ಮೊಬೈಲುಗಳು ಕಡಿಮೆ ದರಕ್ಕೆ ಸಿಗಲಿವೆ .

ಇನ್ನು ಅಮೆಜಾನ್ ಈ ಸೇಲ್ ನ ಕೊನೆಯ ದಿನಾಂಕ ನಿಗದಿ ಮಾಡಿಲ್ಲವಾದರೂ ಶುರುವಾದ ದಿನದಿಂದ 1 ವಾರದ ಕಾಲ ನಡೆಯಬಹುದೆಂಬುದು ನನ್ನ ಲೆಕ್ಕಾಚಾರ.