ಈಗಾಗಲೇ YouTube ವಿಶ್ವದ 2ನೇ ಅತಿ ಹೆಚ್ಚು ಬಳಸುವ search engine ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನೇ ಆಧರಿಸಿ ಹಲವಾರು ವಿಡಿಯೋ creatorಗಳು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. YouTube ವೀಕ್ಷಕರ ಎಲ್ಲ ಪ್ರಶ್ನೆಗಳಿಗೆ ವಿಡಿಯೋಗಳ ಮೂಲಕ ಸಮರ್ಪಕವಾಗಿ ಉತ್ತರಿಸುತ್ತ ಬಂದಿದೆ.
ವೀಕ್ಷಕರ/ನೋಡುಗರ ಅನುಭವವನ್ನು ಉತ್ತಮಗೊಳಿಸಲು YouTube ಮೊಬೈಲ್ ಅಪ್ಲಿಕೇಶನ್ ಗೆ ಹಲವಾರು ಅಪ್ಡೇಟುಗಳು ಬರಲಿವೆ ಎಂದು ಸ್ವತಃ YouTube, ತನ್ನ ಬ್ಲಾಗ್ ನಲ್ಲಿ ಹೇಳಿಕೊಂಡಿದೆ. ಈ ಅಪ್ಡೇಟುಗಳ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ.
- Video chapters: ಹಲವು creatorಗಳು ತಮ್ಮ ವಿಡಿಯೋವನ್ನು ಭಾಗಗಳನ್ನಾಗಿ ತುಂಡರಿಸಿರುತ್ತಾರೆ. ಹೊಸ ಅಪ್ಡೇಟ್ ನಲ್ಲಿ , ವೀಕ್ಷಕರು ತಮಗೆ ಬೇಕಾದ ಭಾಗಕ್ಕೆ ಸುಲಭವಾಗಿ ಹೋಗಬಹುದಾಗಿದೆ. ಉದಾಹರಣೆಗೆ ಒಂದು ಫೋನಿನ ರಿವ್ಯೂ ವಿಡಿಯೋವನ್ನು ,ಫೋನಿನ ಪರಿಚಯ, specifications, ಸಾಧಕ ಭಾದಕಗಳು(pros&cons) ಹೀಗೆ 3 ಪ್ರಮುಖವಾದ ಭಾಗಗಳಾಗಿ ವಿಂಗಡಿಸಿದಾಗ, ನಿಮಗೆ ಕೇವಲ ಸಾಧಕ ಭಾದಕಗಳ ಬಗ್ಗೆ ಆಸಕ್ತಿ ಇದ್ದಲ್ಲಿ ನೇರವಾಗಿ ವಿಡಿಯೋದ 3ನೇ ಭಾಗಕ್ಕೆ ಹೋಗಬಹುದಾಗಿದೆ.

2. YouTube ಪ್ಲೇಯರ್ ನಲ್ಲಿ ಗಮನಾರ್ಹ ಬದಲಾವಣೆ: ವಿಡಿಯೋಗಳ captions ತೋರಲು ಅಥವಾ ತೋರದಿರಲು CC ಬಟನ್, ಪ್ಲೇಯರ್ ನ ಬಲತುದಿಗೆ ಇರಿಸಲಾಗಿದೆ. ಇದರೊಟ್ಟಿಗೆ autoplay ಬಟನ್ ಕೂಡ ಪ್ಲೇಯರ್ ನ ಮೇಲ್ಭಾಕ್ಕೆ ಬದಲಾಯಿಸಿದೆ.

3. Gestureಗಳ ಬಳಕೆ : ನೀವು ಈಗಾಗಲೇ ಫೋನಿನಲ್ಲಿ ಹಲವಾರು gestureಗಳನ್ನು ಬಳಸುತ್ತಿರುತ್ತೀರಿ. YouTube ನಲ್ಲಿ ಇನ್ನು ಮುಂದೆ ವಿಡಿಯೋವನ್ನು ಮೇಲಕ್ಕೆ swipe ಮಾಡುವ ಮೂಲಕ full screenಗೆ ತರಬಹುದಾಗಿದೆ. ಹಾಗೆಯೇ ಯಥಾ ಸ್ಥಿತಿಗೆ ವಾಪಸ್ಸಾಗಲು ಕೆಳಕ್ಕೆ swipe ಮಾಡಬೇಕು.

4. ಸಲಹೆ ಸೂಚನೆಗಳು: ಕೆಲವು ವಿಡಿಯೋಗಳು full screen ನಲ್ಲಿ ನೋಡಿದಾಗ ಉತ್ತಮ ಅನುಭವ ನೀಡುತ್ತವೆ. ಕೆಲವು VR headset ಬಳಸಿ ನೋಡಿದಾಗ ಚೆಂದವೆನಿಸುತ್ತವೆ. ಇನ್ನು ಮುಂದೆ YouTube ವಿಡಿಯೋಗಳಿಗೆ ಈ ರೀತಿಯ ಸಲಹೆಗಳನ್ನು ನೀಡಲಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸಲಹೆಗಳನ್ನು ಸೇರಿಸಲಿದೆ.

ಮೂಲ ಸುದ್ದಿ: YouTube blog-post