UHD(4K) streamingನಿಂದ ಹೆಚ್ಚು ಇಂಗಾಲ ಬಿಡುಗಡೆ!

Share

ವಿಶ್ವದೆಲ್ಲೆಡೆ ಹವಾಮಾನ ವೈಪರೀತ್ಯ (climate change) ನಿಯಂತ್ರಿಸಲು ದೇಶದ ಮುಖ್ಯಸ್ಥರು ಕಾರ್ಯತಂತ್ರ ಹೆಣೆಯುತ್ತಿದ್ದಾರೆ. UKಯ ರಾಯಲ್ ಸೊಸೈಟಿ ವಿಜ್ಞಾನಿಗಳು ಡಿಜಿಟಲ್ technologyಯಿಂದಾಗುವ ಇಂಗಾಲದ ಬಿಡುಗಡೆ(carbon emission) ಬಗ್ಗೆ ಸಂಶೋಧನೆ ನಡೆಸಿದ್ದು ಕೆಳಕಂಡ ಮಾಹಿತಿ ನೀಡಿದ್ದಾರೆ.

ಅಧ್ಯಯನದ ಪ್ರಕಾರ ವಿಡಿಯೋಗಳನ್ನು 4K ಅಥವಾ Ultra High Definition(UHD) ನಲ್ಲಿ stream ಮಾಡುವುದರಿಂದ Standard Definition(480p) ಅಥವಾ ಕಡಿಮೆ ಗುಣಮಟ್ಟದಲ್ಲಿ stream ಮಾಡುವುದಕ್ಕಿಂತ ಸುಮಾರು 8 ಪಟ್ಟು ಹೆಚ್ಚುಇಂಗಾಲ ಬಿಡುಗಡೆಯಾಗುತ್ತಿದೆ ಎಂದಿದ್ದಾರೆ. ವಿಡಿಯೋವನ್ನು 4K ನಲ್ಲಿ stream ಮಾಡುವಾಗ serverಗಳಲ್ಲಿ ಹೆಚ್ಚಿನ ಇಂಧನ ಬಳಕೆಯಾಗಲಿದ್ದು, ಇದು ಹವಾಮಾನ ವೈಪರೀತ್ಯಕ್ಕೆ ಹೆಚ್ಚು ಕೊಡುಗೆ ನೀಡುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದಲ್ಲದೆ ಫೋನ್ ಮತ್ತು ಟ್ಯಾಬ್ಲೆಟ್ ಗಳಲ್ಲಿ 4K, HD ಮತ್ತು SD ವಿಡಿಯೋಗಳ ನಡುವೆ ಗಮನಾರ್ಹ ವ್ಯತ್ಯಾಸ ಕಾಣಸಿಗುವುದಿಲ್ಲವಾದ್ದರಿಂದ steamingನ ಪೂರ್ವನಿಯೋಜಿತ(default) ಆಯ್ಕೆಯನ್ನು SDಗೆ ಗೊತ್ತುಪಡಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಜೊತೆಗೆ ನೀವು ಕೇವಲ ವಿಡಿಯೋದಲ್ಲಿರುವ ಆಡಿಯೋ ಮಾತ್ರ ಕೇಳುತ್ತಿದ್ದರೆ, ವಿಡಿಯೋವನ್ನು ರದ್ದುಪಡಿಸುವ ಮೂಲಕ ಇಂಧನ ಉಳಿಸಬಹುದು. ಜಗತ್ತಿನ ಒಟ್ಟು ಇಂಗಾಲದ ಬಿಡುಗಡೆಗೆ ಹೋಲಿಸಿದರೆ, ಡಿಜಿಟಲ್ technology ಕ್ಷೇತ್ರದ ಕೊಡುಗೆ ಕೇವಲ ಶೇಕಡಾ 1.9 ರಿಂದ 5.9 ಆಗಿದ್ದರೂ ಸಣ್ಣ ಮಾರ್ಪಾಡುಗಳು, ಇಂಧನ/ಶಕ್ತಿ ಉಳಿತಾಯದಲ್ಲಿ ಪ್ರಮುಖ ಪಾತ್ರ ವಹಿಸಲಿವೆ.

ಫೋನುಗಳನ್ನು ದೀರ್ಘವಾದಿಗಳ ಕಾಲ ಬಳಸುವುದರಿಂದ ಹೊಸ ಗ್ಯಾಜೆಟ್ ತಯಾರಿಕೆಯಿಂದ ಉಂಟಾಗುವ carbon emission ಕೂಡ ಕಡಿತಗೊಳಿಸಬಹುದಾಗಿದೆ. ಯಾವುದೇ ಗ್ಯಾಜೆಟ್ ಅನ್ನು ಕನಿಷ್ಠ 2 ರಿಂದ 4 ವರ್ಷ ಬಳಸುವುದರಿಂದ ಗಮನಾರ್ಹ ಕೊಡುಗೆ ನೀಡಿದಂತಾಗುತ್ತದೆ.

ಹೊಸ ಫೋನುಗಳನ್ನು ಖರೀದಿಸುವ ಬದಲಿಗೆ ಬೇರೊಬ್ಬೊರು ಉಪಯೋಗಿಸಿದ ಅಥವಾ ನವೀಕರಣಗೊಂಡ ಹಳೆಯ ಫೋನುಗಳನ್ನು ಕೊಳ್ಳಲು ಜನರನ್ನು ಉತ್ತೇಜಿಸುವುದರಿಂದ ಇನ್ನಷ್ಟು ಉಳಿತಾಯ ಹೆಚ್ಚುತ್ತದೆ ಎಂದು ಸಲಹೆ ನೀಡಿದ್ದಾರೆ.

ಮೂಲ ಸುದ್ದಿ: BBC