ಈ ಹಿಂದೆ ವರದಿ ಮಾಡಿದಂತೆ ಅಮೆರಿಕಾದ ನಾಸ ಸಂಸ್ಥೆಯು ಮಾನವನನ್ನು ಮತ್ತೆ ಚಂದ್ರನಂಗಳಕ್ಕೆ ಕಳಿಸುವ ಎಲ್ಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಗಗನಯಾತ್ರಿಗಳು 2024 ಒಳಗೆ ಚಂದ್ರನಲ್ಲಿ ಪ್ರಯೋಗ ನಡೆಸಲು ಹಾಗು ಮುಂದಿನ ದಶಕದಲ್ಲಿ ಮಾನವ ನೆಲೆಯೂರುವುದು Artemis ಯೋಜನೆಯಡಿಯ ಮುಖ್ಯ ಉದ್ದೇಶ.
ಚಂದ್ರನಂಗಳದಲ್ಲಿ ಮಾನವ ಸಂವಹನ(communication) ಪ್ರಕ್ರಿಯೆ ಸುಲಭವಾಗುವಂತೆ ಮಾಡಲು ನಾಸ 4ಜಿ mobile network ಸ್ಥಾಪಿಸಲು ನೋಕಿಯಾ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. 4ಜಿ network ಗಗನಯಾತ್ರಿಗಳ ನಡುವೆ ಆಡಿಯೋ ಮತ್ತು ವಿಡಿಯೋ ಕರೆಗಳಿಗೆ, ರೊಬೊಟ್ ಗಳನ್ನು ರಿಮೋಟ್ ಮೂಲಕ ನಿಯಂತ್ರಿಸಲು, ಪ್ರಯೋಗದ ಡೇಟಾ ಹಂಚಿಕೊಳ್ಳಲು ಬಳಸಲಾಗುತ್ತದೆ ಎಂದು ನಾಸಾ ತಿಳಿಸಿದೆ.
ನೋಕಿಯಾ ಮತ್ತು Intuitive Machines ಜೊತೆಗೂಡಿ network ಸ್ಥಾಪಿಸಲು ಬೇಕಾದ ಸಲಕರಣೆಗಳನ್ನು 2022ರೊಳಗೆ ಚಂದ್ರನಲ್ಲಿಗೆ ಒಯ್ಯಲು ತಾಲೀಮು ನಡೆಸಿವೆ. ಒಮ್ಮೆ ಚಂದ್ರನನ್ನು ಸೇರಿದ ಮೇಲೆ ಸಲಕರಣೆಗಳು ತಾನಾಗಿಯೇ ರೂಪುಗೊಂಡು 4G ಸಂಪರ್ಕವನ್ನು ಕಲ್ಪಿಸಲಿದೆ.
network ಹಾಗು ಉಪಕರಣಗಳು ಚಂದ್ರನ ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳುವ ಸಾಮರ್ಥ್ಯದ ಜೊತೆಗೆ ಸಾಗಿಸಲು ಉಪಕರಣಗಳ ಗಾತ್ರ ಚಿಕ್ಕವಾಗಿರಬೇಕು.ಪ್ರಾಥಮಿಕ ಹಂತವಾಗಿ 4ಜಿ ನೆಟ್ವರ್ಕ್ ಪರಿಚಯಿಸಲಿದ್ದು ಮುಂದಿನ ದಿನಗಳಲ್ಲಿ 5ಜಿ ಗೆ ಬಡ್ತಿ ನೀಡಲಾಗುತ್ತದೆ ಎಂದು ನೋಕಿಯಾ ತಿಳಿಸಿದೆ.
ಮೂಲ ಸುದ್ದಿ: ನೋಕಿಯಾ ಪತ್ರಿಕಾ ಪ್ರಕಟಣೆ