Photo by Filip Baotić on Unsplash
ಪ್ರತಿ ವರ್ಷ ಸೆಪ್ಟೆಂಬರ್ ನಲ್ಲಿ ಆಪಲ್ ನ ಹೊಸ ಐಫೋನ್ ಗಳು ಬರುವುದು ವಾಡಿಕೆ. ಆದರೆ covid ಕಾರಣದಿಂದ ಉತ್ಪಾದನೆಯಲ್ಲಿ ತೊಂದರೆಗಳಾಗಿ ಅಂದುಕೊಂಡ ಹಾಗೆ ಯಾವ ರೀತಿಯ ಫೋನುಗಳು ಇದೇ ತಿಂಗಳಲ್ಲಿ ನಡೆದ Apple Eventನಲ್ಲಿ ಬಿಡುಗಡೆಗೊಳ್ಳಲಿಲ್ಲ.
ಟೆಕ್ ವಿಶ್ಲೇಷಕನಾಗಿರುವ @jon_prosser, ಟ್ವಿಟ್ಟರ್ ನಲ್ಲಿ ಮುಂದಿನ ಐಫೋನ್ ಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಆಪಲ್ ಮುಂದಿನ ಆವೃತ್ತಿಯ ಐಫೋನ್ 12, ನಾಲ್ಕು ಮಾದರಿಯಲ್ಲಿ ಅಕ್ಟೋಬರ್ 13ರಂದು ಬಿಡುಗಡೆಗೊಳಿಸಲಿದೆ. ಪರದೆಯ ಅಳತೆಯನುಸಾರ iPhone 12 mini, iPhone 12, iPhone 12 Pro, ಮತ್ತು iPhone 12 Pro Max ಎಂದು ಕರೆಯಲಾಗಿದೆ.
5.4 ಇಂಚಿನ ಮಾದರಿಯ ಫೋನುಗಳಿಗೆ ‘mini’(ಮಿನಿ) ಎಂದು ಖಚಿತವಾಗಿ ಹೇಳಿರುವುದನ್ನು ಗಮನಿಸಿದರೆ ಆಪಲ್ ನ iPad ಹಾಗು Mac ಉತ್ಪನ್ನಗಳಿಗೆ ಕರೆದಿರುವ ಹಾಗೆ ಇಲ್ಲಿಯೂ ಹೆಸರಿಸಲಾಗಿದೆ. ಇನ್ನುಳಿದಂತೆ iPhone 12 mini ಹಾಗು Pro Max, 64GB / 128GB / 256GB ಮೂರು ಅವತರಣಿಕೆಯಲ್ಲಿ ಲಭ್ಯವಿರಲಿದ್ದು, iPhone 12, 12 Pro 128GBಯಿಂದ ಆರಂಭಗೊಳ್ಳಲಿದೆ.
ಇನ್ನು ಬೆಲೆಯ ವಿಚಾರವಾಗಿ ಸಧ್ಯಕ್ಕೆ ಯಾವುದೇ ಮಾಹಿತಿಯಿಲ್ಲ. ಮುಂದಿನ ದಿನಗಳಲ್ಲಿ ಆಪಲ್ ಉತ್ಪನ್ನಗಳು ಭಾರತದ ಘಟಕಗಳಲ್ಲಿ ತಯಾರಿಸುವುದರಿಂದ ಬಹಳ ವ್ಯತ್ಯಾಸ ಆಗಬಹುದು. ಅದು ಹೇಗೆ ಎಂಬುದಕ್ಕೆ ಭಾರತದಲ್ಲಿ ಆಪಲ್ ಗ್ಯಾಜೆಟ್ಸ್ ಕಡಿಮೆ ಬೆಲೆಯಲ್ಲಿ ದೊರೆಯಲಿವೆ ಓದಿ.